Saturday 5 September 2009

ವಿಲಾಸ್ ಕುಮಾರ್ ನಿಟ್ಟೆಗೆ ರಾಜೇಶ್ ಶಿಬಾಜೆ ಗೌರವ ಪ್ರಶಸ್ತಿ - ೨೦೦೬

ವಿಲಾಸ್ ಕುಮಾರ್ ನಿಟ್ಟೆಗೆ ರಾಜೇಶ್ ಶಿಬಾಜೆ ಗೌರವ ಪ್ರಶಸ್ತಿ - ೨೦೦೬

ಮೂಡುಬಿದಿರೆ : ವಿಜಯ ಕರ್ನಾಟಕ ಪತ್ರಿಕೆಯ ಕಾರ್ಕಳದ ಸುದ್ದಿಗಾರ ವಿಲಾಸ್ ಕುಮಾರ್ ನಿಟ್ಟೆ ಅವರು ಪತ್ರಕರ್ತರ ವೇದಿಕೆ (ರಿ.) ಉಡುಪಿ ಜಿಲ್ಲಾ ಘಟಕ ನೀಡುವ ರಾಜೇಶ್ ಶಿಬಾಜೆ ಗೌರವ ಪ್ರಶಸ್ತಿ - ೨೦೦೬ಕ್ಕೆ ಆಯ್ಕೆಯಾಗಿದ್ದಾರೆ. ೨೫ರ ಹರೆಯದಲ್ಲಿಯೇ ಪತ್ರಿಕೋದ್ಯಮದಲ್ಲಿ ಸಾಧನೆ ಮಾಡಿ ಪತ್ರಿಕಾ ಆಕಾಡೆಮಿ ಪ್ರಶಸ್ತಿ ಪಡೆದು ನಿಧನರಾದ ರಾಜೇಶ್ ಶಿಬಾಜೆ ಅವರ ಹೆಸರಲ್ಲಿ ಪ್ರಶಸ್ತಿ ನೀಡಲಾಗುತ್ತಿದೆ. ಸೆ. ೧೧ರಂದು ಕಾರ್ಕಳದ ವೆಂಕಟರಮಣ ಮಹಿಳಾ ಕಾಲೇಜಿನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಪತ್ರಕರ್ತರ ಜಿಲ್ಲಾಧ್ಯಕ್ಷ ಶೇಖರ ಅಜೆಕಾರು ತಿಳಿಸಿದ್ದಾರೆ.
ಇಂಟರ್‌ನೆಟ್ ಪ್ರೇಯಸಿ ನಾಲ್ವರಿಗೆ ಒಬ್ಬಳೇ ಹೆಂಡತಿ, ನಾವು ನಕ್ಸಲರಲ್ಲ ನಮ್ಮನ್ನು ಕೊಲ್ಲಬೇಡಿ, ಕೃಷಿಗೆ ಗುಡ್‌ಬೈ ಹೇಳಿದ ಕೃಷಿ ಪಂಡಿತ ತೀರಿಸಲಾಗದ ಸಾಲ. ಬ್ಯಾಂಕ್ ಅಧಿಕಾರಿಗಳ ಕಿರುಕುಳ ಸೇರಿದಂತೆ ಅನೇಕ ವರದಿಗಳ ಮೂಲಕ ಆ ವರ್ಷ ವಿಲಾಸ್ ಕುಮಾರ್ ನಿಟ್ಟೆ ಗಮನ ಸೆಳೆದಿದ್ದರು. ಮುಂಬಯಿ ಕರ್ನಾಟಕ ಮಲ್ಲದ ಹಿರಿಯ ಉಪಸಂಪಾದಕ ಶ್ರೀನಿವಾಸ ಜೋಕಟ್ಟೆ, ದೆಹಲಿಯ ಸಂಡೇ ಇಂಡಿಯನ್‌ನ ಹಿರಿಯ ವಿನ್ಯಾಸಕ ರಾಜೇಶ್ ಶಿಬಾಜೆ ಪ್ರಶಸ್ತಿ ವಿಜೇತ ಪ್ರಕಾಶ್ ಶೆಟ್ಟಿ ಉಳೆಪಾಡಿ ಮತ್ತು ಪ್ರಜಾವಾಣಿ ಹೆಬ್ರಿ ಸುದ್ದಿಗಾರ, ರಾಜೇಶ್ ಶಿಬಾಜೆ ಪ್ರಶಸ್ತಿ ವಿಜೇತ ಸುಕುಮಾರ್ ಮುನಿಯಾಲ್ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿದ್ದರು.
ಪರಿಚಯ
ತ್ರಕರ್ತರಾಗಿ ತುಳುನಾಟಕಗಾರರಾಗಿ ಪರಿಚಿತರಾಗಿರುವ ವಿಲಾಸ್ ಕುಮಾರ್ ನಿಟ್ಟೆ ೨೦೦೪ರಲ್ಲಿ ವಿಜಂii ಕರ್ನಾಟಕದ ನಿಟ್ಟೆ ವರದಿಗಾರರಾಗಿ ಪತ್ರಿಕಾರಂಗ ಪ್ರವೇಶಿಸಿದರು. ೨೦೦೬ರಿಂದ ವಿಜಯ ಕರ್ನಾಟಕ ಕಾರ್ಕಳ ತಾಲೂಕು ವರದಿಗಾರರಾಗಿದ್ದಾರೆ. ಗ್ರಾಮೀಣ ವರದಿಗಾರಿಕೆಯಲ್ಲಿ ಸಿದ್ಧಹಸ್ತರಾದ ಅವರ ನೂರಾರು ವರದಿಗಳು ನೂರಾರು ಸಮಸ್ಯೆಗಳ ಪರಿಹಾರಕ್ಕೆ ಕಾರಣವಾಗಿದೆ. ನಕ್ರೆಯ ಒಂಟಿ ಯುವತಿಯ ಕರಾಳ ಬದುಕು ವರದಿ ಅವಳಿಗೆ ಹೊಸ ಬದುಕು ನೀಡಿದೆ. ಬೆರಳು ನುಂಗಿದ ಪ್ರೇತ ವರದಿ ಗ್ರಾಮೀಣ ಭಾಗದ ಮೂಢನಂಬಿಕೆಯ ವಿರುದ್ಧ ಜಾಗೃತಿ ಕಳಹೆ ಊದಿದೆ. ಲೆಮಿನಾ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದ ವಿಲಾಸ್ ಬಳಿಕ ಪತ್ರಿಕೋದ್ಯಮವನ್ನೇ ಪೂರ್ಣಕಾಲಿಕ ವೃತ್ತಿಯಾಗಿ ಸ್ವೀಕರಿಸಿದರು.
ನಿಟ್ಟೆಯ ಜಗನ್ನಾಥ ಶೆಟ್ಟಿ ಮತ್ತು ಪ್ರೇಮಾ ಶೆಟ್ಟಿ ದಂಪತಿಗಳ ಪುತ್ರ. ಬಿ.ಕಾಂ. ಪದವೀಧರರು. ವಿದ್ಯಾರ್ಥಿ ಜೀವನದಲ್ಲಿಯೇ ಗುತ್ತುದ ಗುರ್ಕಾರೆ ನಾಟಕ ಬರೆದು ಆಡಿಸಿದ್ದರು. ಕರಾವಳಿ ಕಲಾವಿದರು ತಂಡ ಈ ನಾಟಕದ ೧೪ಕ್ಕೂ ಹೆಚ್ಚು ಪ್ರದರ್ಶನ ಮಾಡಿತ್ತು. ಇವರ ಗಗ್ಗರ ನಾಟಕಕ್ಕೆ ೨೦೦೨ರ ರತ್ನವರ್ಮ ಹೆಗ್ಡೆ ನಾಟಕ ಪ್ರಶಸ್ತಿ ಪ್ರಥಮ ಬಹುಮಾನ, ೨೦೦೫ರಲ್ಲಿ ಕಂಬಳದ ನಡುಟೊಂಜಿ ಕತೆಗೆ ರತ್ನವರ್ಮ ಹೆಗ್ಗಡೆ ನಾಟಕ ಪ್ರಶಸ್ತಿ ದ್ವಿತೀಯ ಸ್ಥಾನ ಸಿಕ್ಕಿದೆ. ಮುತ್ತೈಸಿ ಮದಿಮಾಲ್, ತೆಲಿಕೆ ನಲಿಕೆ ಸೇರಿದಂತೆ ೧೧ ತುಳು ನಾಟಕ ಬರೆದಿದ್ದು ಈಗಲೂ ಪ್ರದರ್ಶಿತವಾಗುತ್ತಿವೆ. ಅವರ ತುಳು ಕಾದಂಬರಿ ಗುತ್ತುದ ಇಲ್ಲ್ ಸಿದ್ಧವಾಗುತ್ತಿದೆ.

2 comments:

Th Editor said...

eadde undu marayere

namana bajagoli said...

ಅರ್ಹರಾದವರಿಗೆ ಪ್ರಶಸ್ಥಿ ಸಿಕ್ಕಿದೆ.ಅವರು "ನಮನ ಕಲಾವಿದೆರ್ ನಿಟ್ಟೆ" ಇವರ ಮೊಲಕ ತಮ್ಮ ನಾಟಕ ಆಡಿಸ್ತಿದ್ದಾರೆ.
ನಮನಗಣೆಶ್
ಬಜಗೊಳೀ