Friday, 29 June 2012

We Selute Mr.A.S.N Hebbar


A.S.N Hebbar to recieve Press Day Honour

by Patrakarthara Vedike, Bangalore. Shekar Ajekar, Udupi district president of Vedike, Kannada Sahitya Parishat Udupi District President Neelavara Surendra Adiga, Mentor of spoorthy dhama Kedoor Mr.Keshava Koteshwara,Fonder of www.kundapra.com Mr.Sunil Baindoor will present in this occassion. Place: Kundapura Date : 30-06-2012

ಎಎಸ್‌ಎನ್ ಹೆಬ್ಬಾರ್ ಅವರಿಗೆ ಪತ್ರಿಕಾ ದಿನಾಚರಣೆಯ ಗೌರವ
ಅಜೆಕಾರು: ಪತ್ರಕರ್ತರ ವೇದಿಕೆ(ರಿ) ಬೆಂಗಳೂರು ಇದರ ಉಡುಪಿ ಜಿಲ್ಲಾ ಘಟಕ ನೀಡುವ ಐದನೆ ವರ್ಷದ ಪತ್ರಿಕೋದ್ಯಮ ದಿನಾಚರಣೆಯ ಗೌರವವನ್ನು ಹಿರಿಯ ಪತ್ರಕರ್ತ, ಸಮಾಜ ಸೇವಾಸಕ್ತ, ವಕೀಲ ಕುಂದಾಪುರದ ಎ.ಎಸ್.ಎನ್ ಹೆಬ್ಬಾರ್ ಅವರಿಗೆ ಜೂನ್ ೩೦ ರಂದು ನೀಡಲಾಗುತ್ತಿದೆ ಎಂದು ವೇದಿಕೆಯ ಉಡುಪಿ ಜಿಲ್ಲಾಧ್ಯಕ್ಷ ಶೇಖರ ಅಜೆಕಾರು ತಿಳಿಸಿದ್ದಾರೆ. ಪತ್ರಕರ್ತರ ವೇದಿಕೆ,ಕುಂದಾಪ್ರ ಡಾಟ್ ಕಾಮ್, ಶ್ರೀ ಸ್ಕೂಲ್ ಆಫ್ ಜರ್ನಲಿಸಂ ಮೂಡುಬಿದಿರೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರ ನಡೆಯುತ್ತಿದ್ದು ವೇದಿಕೆ ಪತ್ರಿಕಾ ದಿನಾಚರಣೆಯನ್ನು ’ಹಿರಿಯರೆಡೆಗೆ ನಮ್ಮ ನಡಿಗೆ’ ಧ್ಯೇಯದೊಂದಿಗೆ ನಡೆಸುತ್ತಿದೆ. ವಿವಿಧ ಸ್ಥಳೀಯ ಸಂಸ್ಥೆಗಳು, ಅಂತಾರಾಷ್ಟ್ರೀಯ ಸಂಸ್ಥೆಗಳು ಮೂಲಕ ಮತ್ತು ವಿವಿಧ ಪತ್ರಿಕೆಗಳ ಮೂಲಕ ಗಮನ ಸೆಳೆದಿದ್ದು ಉಡುಪಿ ಜಿಲ್ಲಾ ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆಯ ಗೌರವಕ್ಕೆ ಪಾತ್ರರಾಗಿದ್ದರು. ಸುಮಾರು ಐವತ್ತು ವರ್ಷಗಳಿಂದ ಕಾರ್ಯಪ್ರವೃತ್ತರಾಗಿರುವ ಹಿರಿಯ ಪತ್ರಕರ್ತ ಹೆಬ್ಬಾರರು ಉದಯವಾಣಿ,ಪ್ರಜಾವಾಣಿ,ಡೆಕ್ಕನ್ ಹೆರಾಲ್ಡ್ ಪತ್ರಿಕೆಗಳ ಮೂಲಕ ಪತ್ರ ಗಮನ ಸೆಳೆದವರು. ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಸ್ಫೂರ್ತಿ ಧಾಮದ ಕೇಶವ ಕೋಟೇಶ್ವರ, ಕುಂದಾಪ್ರ ಡಾಟ್ ಕಾಮ್ ಮುಖ್ಯಸ್ಥ ಸುನೀಲ್ ಬೈಂದೂರ್, ಉಡುಪಿ ಎಂ.ಜಿ ಎಂ.ಕಾಲೇಜಿನ ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ಬೋರ್ಗಲ್‌ಗುಡ್ಡೆ ಮಂಜುನಾಥ್ ಮುಖ್ಯ ಅತಿಥಿಗಳಾಗಿರುವರು. ಅಂಬಾತನಯ ಮುದ್ರಾಡಿ, ವಿದ್ವಾನ್ ಬಿ ಚಂದ್ರಯ್ಯ, ಉಮೇಶ್ ರಾವ್ ಎಕ್ಕಾರ್, ಕು.ಗೋ ಅವರು ಈ ಹಿಂದಿನ ವರ್ಷಗಳಲ್ಲಿ ಈ ಗೌರವಕ್ಕೆ ಪಾತ್ರರಾಗಿದ್ದರು. ಹಿರಿಯ ಪತ್ರಕರ್ತ ಎ.ಎಸ್.ಎನ್.ಹೆಬ್ಬಾರ್ ಪರಿಚಯ ಉಡುಪಿ ಜಿಲ್ಲೆಯ ಹಿರಿಯ ಪತ್ರಕರ್ತರಾದ ಶ್ರೀ ಎ.ಎಸ್.ಎನ್.ಹೆಬ್ಬಾರರ ಪತ್ರಿಕೋದ್ಯಮಕ್ಕೆ ೫೦ ವರ್ಷಗಳಿಗೂ ಮಿಕ್ಕಿದ ಇತಿಹಾಸವಿದೆ. ೧೯೫೭ರಿಂದ ೧೯೬೦ರ ವರೆಗೆ ಮಂಗಳೂರಿನ ಸರಕಾರಿ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದಾಗಿನಿಂದಲೇ ಸುದ್ದಿ ಬರೆಯತೊಡಗಿದ ಹೆಬ್ಬಾರರು ಅಂದಿನ ’ನವಭಾರತ’ ಪತ್ರಿಕಾಲಯಕ್ಕೆ ಹೋಗಿ ಸಂಪಾದಕ ಬನ್ನಂಜೆ ರಾಮಾಚಾರ್ಯರ ಕೈಯಲ್ಲೇ ಸುದ್ದಿ ನೀಡುತ್ತಿದ್ದವರು. ಹಾಗಾಗಿಯೇ ೧೯೬೯ರಲ್ಲಿಯೇ ಮಣಿಪಾಲದ ’ಉದಯವಾಣಿ’ಯ ಅಧಿಕೃತ ಆರಂಭದ ಮುನ್ನ ಅದರ ಪ್ರಾಯೋಗಿಕ ಸಂಚಿಕೆಗಳಿಗೂ ಸಂಪಾದಕ ರಾಮಾಚಾರ್ ಆದೇಶದಂತೆ ಹೆಬ್ಬಾರರೇ ಕುಂದಾಪುರದಿಂದ ಸುದ್ದಿ ಕಳುಹಿಸುತ್ತಿದ್ದವರು. ೧೯೭೦ ಜನವರಿ ೧ರಿಂದ ’ಉದಯವಾಣಿ’ ಪ್ರಾರಂಭವಾದಾಗಿನಿಂದಲೂ ಕುಂದಾಪುರ ತಾಲೂಕಿನ ಏಕೈಕ ವರದಿಗಾರರಾಗಿ ಅವರು ಅನುಪಮ ಸೇವೆ ಸಲ್ಲಿಸಿದ್ದರು. ಅವರ ಮಾನವೀಯ ಆಸಕ್ತಿಯ ವರದಿಗಳು, ಸಾಹಿತ್ಯಮಯ ಶೀರ್ಷಿಕೆಗಳು ಪ್ರಸಿದ್ಧ. ಈ ಮಧ್ಯೆ ಅವರ ಪತ್ರಿಕಾ ವೃತ್ತಿಯ ಆಸಕ್ತಿ ಕಂಡು ಅವಿಭಜಿತ ದ.ಕ.ಜಿಲ್ಲೆಯ ಹಿರಿಯ ಪತ್ರಕರ್ತರಾಗಿದ್ದ ಬಂಧು ಕೆ.ಎಸ್.ಉಪಾಧ್ಯಾಯರೊಂದಿಗೆ ಕುಂದಾಪುರಕ್ಕೆ ಬಂದಿದ್ದ ಅಂದಿನ ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್‌ಗಳ ಸಂಪಾದಕರುಗಳಾದ ಖಾದ್ರಿ ಶಾಮಣ್ಣ ಮತ್ತು ಆರ್.ಶೇಷಾದ್ರಿ ೧೯೬೫ರಲ್ಲೇ ಹೆಬ್ಬಾರರನ್ನು ಆ ಎರಡೂ ಪತ್ರಿಕೆಗಳ ತಾಲೂಕು ಸುದ್ದಿಗಾರರನ್ನಾಗಿಸಿ ನೇಮಕ ಮಾಡಿದ್ದರು. ಹೆಬ್ಬಾರರ ’ಸರ್ಪರಾಜನ ಸೈಕಲ್ ಸವಾರಿ’ ಎಂಬ ಮಾನವೀಯ ಆಸಕ್ತಿಯ ಸುದ್ದಿ ಚಿತ್ರ ರಾಷ್ಟ್ರಮಟ್ಟದಲ್ಲಿ ಸಂಚಲನ ಮೂಡಿಸಿ ಪ್ರಜಾವಾಣಿಯ ಸಂಪಾದಕ ಟಿ.ಎಸ್.ಆರ್.ರಿಂದಲೂ ಶಾಭಾಷ್‌ಗಿರಿ ಪಡೆದಿತ್ತು. ಕುಂದಾಪುರ ಕರಾವಳಿಯಲ್ಲಿ ಹುಗಿದಿಟ್ಟ ಕಳ್ಳ ಬೆಳ್ಳಿ ಪತ್ತೆ ಕುರಿತು ಅವರ ವರದಿಗಳು ಆಗ ಜನರಿಗೆ ರಸಗವಳವಾಗಿತ್ತು. ಕಲ್ಮರ್ಗಿಯ ಕುಡುಬಿಯರ ಕೇರಿಗೆ ಬೆಂಕಿ ಬಿದ್ದಾಗ ಅಲ್ಲಿಗೆ ಧಾವಿಸಿ ಹೋಗಿ ಅವರು ಬರೆದ ಚಿತ್ರ ಸಹಿತ ಮನಕಲುಕುವ ವರದಿಗಳಿಂದಾಗಿ ಇಡೀ ಕೇರಿಯ ಪುನರ್‌ನಿರ್ಮಾಣ ದಾಖಲೆ ವೇಗದಲ್ಲಿ ಕೊಡುಗೈದಾನಿಗಳ ನೆರವಿನಿಂದ ಆಗಿತ್ತು. ಗಣಪತಿ ಎಂಬ ಆಂಧ್ರದ ಬಾಲಕ ದಾರಿ ತಪ್ಪಿ ಬೈಂದೂರಿಗೆ ಬಂದು ಗೊತ್ತುಗುರಿ ಗೊತ್ತಿಲ್ಲದೇ ಪೋಲೀಸ್ ಠಾಣೆಯಲ್ಲಿ ಇದ್ದಾಗ, ’ಈ ನಾಡು’ ಸಂಪಾದಕ ರಾಮೋಜಿರಾವ್‌ರನ್ನು ಸಂಪರ್ಕಿಸಿ ತೆಲುಗು ಪತ್ರಿಕೆಗೂ ಚಿತ್ರ ಸಹಿತ ತನ್ನ ವರದಿ ಪ್ರಕಟವಾಗುವಂತೆ ಮಾಡಿ ಗಣಪತಿ ತನ್ನ ಹೆತ್ತವರನ್ನು ಸೇರಿಕೊಳ್ಳುವಂತೆ ಮಾಡಿದ ಕೀರ್ತಿ ಹೆಬ್ಬಾರರದು. ಹೀಗೆ ಹತ್ತು ಹಲವು ಸಾರ್ಥಕ, ಸ್ವಾರಸ್ಯಕರ, ಜನೋಪಕಾರಿ ವರದಿಗಳ ಸರದಾರರಾಗಿರುವ ಎ.ಎಸ್.ಎನ್.ಹೆಬ್ಬಾರರಿಗೆ ಈಗ ೭೨ ವರ್ಷ ವಯಸ್ಸಾಗುತ್ತಿದ್ದರೂ ಅಂಕಣಕಾರರಾಗಿ ಈಗಲೂ ಬರೆಯುತ್ತಾ ಜನಾಕರ್ಷಣೆ ಪಡೆದಿದ್ದಾರೆ. ಇನ್ನೂ ಬರೆಯುತ್ತಲೇ ಇದ್ದಾರೆ. ಅನೇಕ ದೇಶಗಳನ್ನು ಸುತ್ತಿ ಬಂದ ಅವರ ಪ್ರವಾಸ ಕಥನಗಳು ಸ್ವಾರಸ್ಯಕರ. ’ಕುಂದಪ್ರಭ’ ಮತ್ತು ’ಸುದ್ದಿಮನೆ’ಗಳಲ್ಲಿ ಅವುಗಳನ್ನು ಪ್ರಕಟಿಸಿದ್ದಾರೆ. ಕಥೆ, ನಗೆಲೇಖನ, ಪ್ರಬಂಧ, ಕವಿತೆಗಳಿಗೂ ಅವರು ಸಿದ್ಧ ಹಸ್ತರು. ವಿದ್ಯಾರ್ಥಿಯಾಗಿದ್ದಾಗಲೇ ಅವರು ಬರೆದ ಕಥೆಗೆ ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆಯ ಬಹುಮಾನ ಬಂದಿತ್ತು. ಕುಂದಾಪುರ ತಾಲೂಕು ಪತ್ರಕರ್ತರ ಸಂಘದ ಸ್ಥಾಪಕ ಅಧ್ಯಕ್ಷರಾಗಿದ್ದ ಎ.ಎಸ್.ಎನ್.ಹೆಬ್ಬಾರರು ಉಡುಪಿ ಜಿಲ್ಲೆ ಕಾರ್ಯನಿರತ ಪತ್ರಕರ್ತರ ಸಂಘಟನೆಗೆ ಶ್ರಮಿಸಿ, ಅವರೇ ಅದಕ್ಕೊಂದು ಸಂವಿಧಾನ ರೂಪಿಸಿ, ಅದರ ಸ್ಥಾಪಕ ಉಪಾಧ್ಯಕ್ಷರಾಗಿದ್ದವರು. ಈಗಲೂ ಈ ಎರಡು ಸಂಸ್ಥೆಗಳ ಆಜೀವ ಸದಸ್ಯರು. ಕುಂದಾಪುರದಲ್ಲಿ ೧೯೬೩ರಿಂದ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಅವರ ವಕೀಲಿ ವೃತ್ತಿಗೆ ಮುಂದಿನ ವರ್ಷ ೫೦ ತುಂಬುತ್ತದೆ. ಅವರ ತಂದೆಯವರೂ ಖ್ಯಾತ ವಕೀಲರೇ. ಅಸಾಧಾರಣ ಸಂಘಟಕರೂ ಆಗಿರುವ ಅವರು ದ.ಕ ಜಿಲ್ಲಾ ವಕೀಲರ ಸಂಘದ ಸ್ಥಾಪಕ ಕಾರ್ಯದರ್ಶಿಯಾಗಿದ್ದವರು. ರೋಟರಿ ಜಿಲ್ಲಾ ೩೧೮೦ರ ಶತಾಬ್ದಿ ಗವರ್ನರ್, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪಕ ಅಧ್ಯಕ್ಷರಾಗಿ ಎರಡು ಅವಧಿಗೆ ಸೇವೆ, ಉಡುಪಿ ಜಿಲ್ಲಾ ೭ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ, ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರದ ಅಧ್ಯಕ್ಷ, ಬಿ.ಆರ್.ರಾಯರ ಹಿ.ಪ್ರಾ.ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷ, ರೂಪರಂಗ ನಾಟಕ ಸಂಸ್ಥೆಯ ಅಧ್ಯಕ್ಷ, ಕುಂದಾಪುರ ಜೇಸಿಸ್ ಸ್ಥಾಪಕ ಅಧ್ಯಕ್ಷ, ಭಾಷಣ ಕಲೆಯ ಅಪ್ರತಿಮ ತರಬೇತುದಾರ, ಸ್ವತಃ ವಾಗ್ಮಿ, ನಗೆಗಾರ, ಅಭಿನಯಕಾರ ಹೀಗೆ ಹತ್ತು ಹಲವು ಸಂಸ್ಥೆಗಳಲ್ಲಿ ಸಕ್ರಿಯರಾಗಿ ಹತ್ತು ಹಲವು ಪ್ರತಿಭೆಗಳಿಂದ ಮಿಂಚುತ್ತಿರುವ ಶ್ರೀ ಎ.ಎಸ್.ಎನ್.ಹೆಬ್ಬಾರರು ಹಿರಿಯ ಪತ್ರಕರ್ತರಾಗಿ ಈಗಲೂ ಸಮಾಜಮುಖಿಯಾಗಿ ಕ್ರೀಯಾಶೀಲರಾಗಿ ಸೇವೆ ಸಲ್ಲಿಸುತ್ತಲೇ ಇದ್ದಾರೆ. ಕುಂದಾಪುರದಲ್ಲಿ ಜನಿಸಿ ಅಲ್ಲೇ ’ನುಡಿ’ ಮನೆಯಲ್ಲಿ ನೆಲೆಸಿರುವ ಹೆಬ್ಬಾರರು ಪತ್ನಿ ಶ್ರೀಮತಿ ಸುಧಾ, ಮೂವರು ಮಕ್ಕಳು ರಘುನಂದನ, ಸ್ವಾತಿ, ಶ್ರೀವತ್ಸ ಮತ್ತು ಆರು ಮೊಮ್ಮಕ್ಕಳನ್ನು ಹೊಂದಿದ್ದು ಸುಖೀ ಕುಟುಂಬ ಪಡೆದಿದ್ದಾರೆ.

Friday, 14 October 2011

ಜನವರಿ ೨೫ ರಂದು ಆದಿಗ್ರಾಮೋತ್ಸವ ಸಂಭ್ರಮ ನಡೆಯಲಿದೆ ಎಂದು ಅದರ ಪರಿಕಲ್ಪನೆ ಮಾಡಿರುವ ಶೇಖರ ಅಜೆಕಾರು ಅವರೂ ತಿಳ್ಹಿಸಿದ್ದಾರೆ. ಅವ್ರು tiLisidfdAre

ಜನವರಿ ೨೫ ರಂದು ಆದಿಗ್ರಾಮೋತ್ಸವ ಸಂಭ್ರಮ ನಡೆಯಲಿದೆ ಎಂದು ಅದರ ಪರಿಕಲ್ಪನೆ ಮಾಡಿರುವ ಶೇಖರ ಅಜೆಕಾರು ಅವರೂ ತಿಳ್ಹಸಿದ್ದಾರೆ

Sunday, 22 August 2010

ಉದಯ ಕುಮಾರ ಶೆಟ್ಟಿ ಅವರಿಗೆ ಸನ್ಮಾನ :ಪ್ರಜಾವಾಣಿಯ ಪ್ರಸರ ವಿಭಾಗದ ಉದಯ ಕುಮಾರ್ ಶೆಟ್ಟಿ ಅವರನ್ನು ಹೆಬ್ರಿಯಲ್ಲಿ ಬಾನುವಾರ ವರ್ಗಾವಣೆಗಾಗಿ ಸನ್ಮಾನಿಸಲಾಯಿತು.





ಉದಯ ಕುಮಾರ ಶೆಟ್ಟಿ ಅವರಿಗೆ ಸನ್ಮಾನ :ಪ್ರಜಾವಾಣಿಯ ಪ್ರಸರ ವಿಭಾಗದ ಉದಯ ಕುಮಾರ್ ಶೆಟ್ಟಿ ಅವರನ್ನು ಹೆಬ್ರಿಯಲ್ಲಿ ಬಾನುವಾರ ವರ್ಗಾವಣೆಗಾಗಿ ಸನ್ಮಾನಿಸಲಾಯಿತು

Saturday, 5 September 2009

ವಿಲಾಸ್ ಕುಮಾರ್ ನಿಟ್ಟೆಗೆ ರಾಜೇಶ್ ಶಿಬಾಜೆ ಗೌರವ ಪ್ರಶಸ್ತಿ - ೨೦೦೬

ವಿಲಾಸ್ ಕುಮಾರ್ ನಿಟ್ಟೆಗೆ ರಾಜೇಶ್ ಶಿಬಾಜೆ ಗೌರವ ಪ್ರಶಸ್ತಿ - ೨೦೦೬

ಮೂಡುಬಿದಿರೆ : ವಿಜಯ ಕರ್ನಾಟಕ ಪತ್ರಿಕೆಯ ಕಾರ್ಕಳದ ಸುದ್ದಿಗಾರ ವಿಲಾಸ್ ಕುಮಾರ್ ನಿಟ್ಟೆ ಅವರು ಪತ್ರಕರ್ತರ ವೇದಿಕೆ (ರಿ.) ಉಡುಪಿ ಜಿಲ್ಲಾ ಘಟಕ ನೀಡುವ ರಾಜೇಶ್ ಶಿಬಾಜೆ ಗೌರವ ಪ್ರಶಸ್ತಿ - ೨೦೦೬ಕ್ಕೆ ಆಯ್ಕೆಯಾಗಿದ್ದಾರೆ. ೨೫ರ ಹರೆಯದಲ್ಲಿಯೇ ಪತ್ರಿಕೋದ್ಯಮದಲ್ಲಿ ಸಾಧನೆ ಮಾಡಿ ಪತ್ರಿಕಾ ಆಕಾಡೆಮಿ ಪ್ರಶಸ್ತಿ ಪಡೆದು ನಿಧನರಾದ ರಾಜೇಶ್ ಶಿಬಾಜೆ ಅವರ ಹೆಸರಲ್ಲಿ ಪ್ರಶಸ್ತಿ ನೀಡಲಾಗುತ್ತಿದೆ. ಸೆ. ೧೧ರಂದು ಕಾರ್ಕಳದ ವೆಂಕಟರಮಣ ಮಹಿಳಾ ಕಾಲೇಜಿನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಪತ್ರಕರ್ತರ ಜಿಲ್ಲಾಧ್ಯಕ್ಷ ಶೇಖರ ಅಜೆಕಾರು ತಿಳಿಸಿದ್ದಾರೆ.
ಇಂಟರ್‌ನೆಟ್ ಪ್ರೇಯಸಿ ನಾಲ್ವರಿಗೆ ಒಬ್ಬಳೇ ಹೆಂಡತಿ, ನಾವು ನಕ್ಸಲರಲ್ಲ ನಮ್ಮನ್ನು ಕೊಲ್ಲಬೇಡಿ, ಕೃಷಿಗೆ ಗುಡ್‌ಬೈ ಹೇಳಿದ ಕೃಷಿ ಪಂಡಿತ ತೀರಿಸಲಾಗದ ಸಾಲ. ಬ್ಯಾಂಕ್ ಅಧಿಕಾರಿಗಳ ಕಿರುಕುಳ ಸೇರಿದಂತೆ ಅನೇಕ ವರದಿಗಳ ಮೂಲಕ ಆ ವರ್ಷ ವಿಲಾಸ್ ಕುಮಾರ್ ನಿಟ್ಟೆ ಗಮನ ಸೆಳೆದಿದ್ದರು. ಮುಂಬಯಿ ಕರ್ನಾಟಕ ಮಲ್ಲದ ಹಿರಿಯ ಉಪಸಂಪಾದಕ ಶ್ರೀನಿವಾಸ ಜೋಕಟ್ಟೆ, ದೆಹಲಿಯ ಸಂಡೇ ಇಂಡಿಯನ್‌ನ ಹಿರಿಯ ವಿನ್ಯಾಸಕ ರಾಜೇಶ್ ಶಿಬಾಜೆ ಪ್ರಶಸ್ತಿ ವಿಜೇತ ಪ್ರಕಾಶ್ ಶೆಟ್ಟಿ ಉಳೆಪಾಡಿ ಮತ್ತು ಪ್ರಜಾವಾಣಿ ಹೆಬ್ರಿ ಸುದ್ದಿಗಾರ, ರಾಜೇಶ್ ಶಿಬಾಜೆ ಪ್ರಶಸ್ತಿ ವಿಜೇತ ಸುಕುಮಾರ್ ಮುನಿಯಾಲ್ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿದ್ದರು.
ಪರಿಚಯ
ತ್ರಕರ್ತರಾಗಿ ತುಳುನಾಟಕಗಾರರಾಗಿ ಪರಿಚಿತರಾಗಿರುವ ವಿಲಾಸ್ ಕುಮಾರ್ ನಿಟ್ಟೆ ೨೦೦೪ರಲ್ಲಿ ವಿಜಂii ಕರ್ನಾಟಕದ ನಿಟ್ಟೆ ವರದಿಗಾರರಾಗಿ ಪತ್ರಿಕಾರಂಗ ಪ್ರವೇಶಿಸಿದರು. ೨೦೦೬ರಿಂದ ವಿಜಯ ಕರ್ನಾಟಕ ಕಾರ್ಕಳ ತಾಲೂಕು ವರದಿಗಾರರಾಗಿದ್ದಾರೆ. ಗ್ರಾಮೀಣ ವರದಿಗಾರಿಕೆಯಲ್ಲಿ ಸಿದ್ಧಹಸ್ತರಾದ ಅವರ ನೂರಾರು ವರದಿಗಳು ನೂರಾರು ಸಮಸ್ಯೆಗಳ ಪರಿಹಾರಕ್ಕೆ ಕಾರಣವಾಗಿದೆ. ನಕ್ರೆಯ ಒಂಟಿ ಯುವತಿಯ ಕರಾಳ ಬದುಕು ವರದಿ ಅವಳಿಗೆ ಹೊಸ ಬದುಕು ನೀಡಿದೆ. ಬೆರಳು ನುಂಗಿದ ಪ್ರೇತ ವರದಿ ಗ್ರಾಮೀಣ ಭಾಗದ ಮೂಢನಂಬಿಕೆಯ ವಿರುದ್ಧ ಜಾಗೃತಿ ಕಳಹೆ ಊದಿದೆ. ಲೆಮಿನಾ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದ ವಿಲಾಸ್ ಬಳಿಕ ಪತ್ರಿಕೋದ್ಯಮವನ್ನೇ ಪೂರ್ಣಕಾಲಿಕ ವೃತ್ತಿಯಾಗಿ ಸ್ವೀಕರಿಸಿದರು.
ನಿಟ್ಟೆಯ ಜಗನ್ನಾಥ ಶೆಟ್ಟಿ ಮತ್ತು ಪ್ರೇಮಾ ಶೆಟ್ಟಿ ದಂಪತಿಗಳ ಪುತ್ರ. ಬಿ.ಕಾಂ. ಪದವೀಧರರು. ವಿದ್ಯಾರ್ಥಿ ಜೀವನದಲ್ಲಿಯೇ ಗುತ್ತುದ ಗುರ್ಕಾರೆ ನಾಟಕ ಬರೆದು ಆಡಿಸಿದ್ದರು. ಕರಾವಳಿ ಕಲಾವಿದರು ತಂಡ ಈ ನಾಟಕದ ೧೪ಕ್ಕೂ ಹೆಚ್ಚು ಪ್ರದರ್ಶನ ಮಾಡಿತ್ತು. ಇವರ ಗಗ್ಗರ ನಾಟಕಕ್ಕೆ ೨೦೦೨ರ ರತ್ನವರ್ಮ ಹೆಗ್ಡೆ ನಾಟಕ ಪ್ರಶಸ್ತಿ ಪ್ರಥಮ ಬಹುಮಾನ, ೨೦೦೫ರಲ್ಲಿ ಕಂಬಳದ ನಡುಟೊಂಜಿ ಕತೆಗೆ ರತ್ನವರ್ಮ ಹೆಗ್ಗಡೆ ನಾಟಕ ಪ್ರಶಸ್ತಿ ದ್ವಿತೀಯ ಸ್ಥಾನ ಸಿಕ್ಕಿದೆ. ಮುತ್ತೈಸಿ ಮದಿಮಾಲ್, ತೆಲಿಕೆ ನಲಿಕೆ ಸೇರಿದಂತೆ ೧೧ ತುಳು ನಾಟಕ ಬರೆದಿದ್ದು ಈಗಲೂ ಪ್ರದರ್ಶಿತವಾಗುತ್ತಿವೆ. ಅವರ ತುಳು ಕಾದಂಬರಿ ಗುತ್ತುದ ಇಲ್ಲ್ ಸಿದ್ಧವಾಗುತ್ತಿದೆ.

Saturday, 4 July 2009

ರಾಯಿ ರಾಜ್ ಕುಮಾರ್ ಅವರಿಗೆ ಪತ್ರಕರ್ತರ ಸಂಘದ ಗೌರವ




Mooodbidre Journalist Association celebrated press day on July 4th at it’s press club.
They honored Rayi Raj Kumar for his service to Journalism as reporter to Hosa Digantha and Mangalore Mithra now he is teacher at Jain High School.
Mr. Bhaskar Hegde ,the head of Department, SDM college Ujire delivered a talk on Development Journalism.
Development of Journalism is Development he opined.
Mr. Vishwanath Prabhu, Businessman of Moodbidre remembered his association with as a news contributer to Navabharath and Udayavani.
Ganesh Kamath President of Press club presided over the function.
The general secretary of press club introduced the club and it’s success story.
Dhananjaya Moodbidre presented Thomas Alva Edison as a Journalist.
Shankar Naik,Sadananda Hegdekatta, Seetharama Acharya,Goverdhan Hosamani and othrs were present in this occasion.

presente by shekar Ajekar.

Thursday, 29 January 2009

ಚಿದಂಬರ ಬೈಕಂಪಾಡಿ ಮಾಧ್ಯಮ ರತ್ನ ಪ್ರಶಸ್ತಿ


ಚಿದಂಬರ ಬೈಕಂಪಾಡಿ ಅಜೆಕಾರಿನಲ್ಲಿ ನಡೆಯುವ ಪ್ರಥಮ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೆಳನದಲ್ಲಿ ಮಾಧ್ಯಮ ರತ್ನ ಪ್ರಶಸ್ತಿ ಸ್ವೀಕರಿಸಲಿದ್ದಾರೆ.ವ್ಯಕ್ತಿ ಪರಿಚಯ
ಹೆಸರು: ಚಿದಂಬರ ಬೈಕಂಪಾಡಿ
ವಿಳಾಸ: ೧೦೨ ಬಿ, ರೈಲ್ವೆ ಸೇತುವೆ ಬಳಿ,
೮ನೇ ಬ್ಲಾಕ್, ಚೊಕ್ಕಬೆಟ್ಟು
ಸುರತ್ಕಲ್ ೫೭೫ ೦೧೪, ಮಂಗಳೂರು, ದಕ್ಷಿಣ ಕನ್ನಡ
ಶಿಕ್ಷಣ: ಡಿಪ್ಲೊಮ ಇನ್ ಪಾಲಿಮಾರ್ ಟೆಕ್ನಾಲಜಿ
ವೃತ್ತಿ: ಪತ್ರಿಕೋದ್ಯಮ
ಅನುಭವ: ಮುಂಗಾರು, ಕನ್ನಡ ಪ್ರಭ ಪತ್ರಿಕೆಗಳಲ್ಲಿ ಪ್ರಧಾನ
ವರದಿಗಾರರಾಗಿ ೨೭ ವರ್ಷ ಸೇವೆ
ಪ್ರಸ್ತುತ ವಿ-೪ ಮಿಡಿಯ ನ್ಯೂಸ್ ಚಾನಲ್
ಪ್ರಧಾನ ಸಂಪಾದಕ
ಹವ್ಯಾಸ: ಕಥೆ, ಕವನ, ಲೇಖನ ಬರೆಯುವುದು
ಪ್ರಕಟಣೆಗಳು: ಬೇಗುದಿ, ವಾಸ್ತವದ ಲೆಕ್ಕಾಚಾರ, ಕಪ್ಪು ಹುಡುಗ
(ಕವನಸಂಕಲನಗಳು)
'ಮಲ್ಲಿಗೆ' - ತುಳು ಪ್ರೇಮ ಗೀತೆಗಳ ಧ್ವನಿ ಸುರುಳಿ
ಪ್ರಶಸ್ತಿಗ ವ್ಯಕ್ತಿ ಪರಿಚಯ
ಶಿಕ್ಷಣ: ಡಿಪ್ಲೊಮ ಇನ್ ಪಾಲಿಮಾರ್ ಟೆಕ್ನಾಲಜಿ
ವೃತ್ತಿ: ಪತ್ರಿಕೋದ್ಯಮ
ಅನುಭವ: ಮುಂಗಾರು, ಕನ್ನಡ ಪ್ರಭ ಪತ್ರಿಕೆಗಳಲ್ಲಿ ಪ್ರಧಾನ
ವರದಿಗಾರರಾಗಿ ೨೭ ವರ್ಷ ಸೇವೆ
ಪ್ರಸ್ತುತ ವಿ-೪ ಮಿಡಿಯ ನ್ಯೂಸ್ ಚಾನಲ್
ಪ್ರಧಾನ ಸಂಪಾದಕ
ಹವ್ಯಾಸ: ಕಥೆ, ಕವನ, ಲೇಖನ ಬರೆಯುವುದು
ಪ್ರಕಟಣೆಗಳು: ಬೇಗುದಿ, ವಾಸ್ತವದ ಲೆಕ್ಕಾಚಾರ, ಕಪ್ಪು ಹುಡುಗ
(ಕವನಸಂಕಲನಗಳು)
'ಮಲ್ಲಿಗೆ' - ತುಳು ಪ್ರೇಮ ಗೀತೆಗಳ ಧ್ವನಿ ಸುರುಳಿ
ಪ್ರಶಸ್ತಿಗಳು: ಅತ್ಯುತ್ತಮ ತನಿಖಾ ವರದಿಗಾರ - ರಾಜ್ಯ
ಪತ್ರಕರ್ತರ ಸಂಘದ ಪ್ರಶಸ್ತಿ
ಬೆಂಗರೆ ಬಾನುಲಿ ಸಾಕ್ಷ್ಯರೂಪಕಕ್ಕೆ ಅಖಿಲ ಭಾರತ ಆಕಾಶವಾಣಿ ರಾಷ್ಟ್ರೀಯ ಪ್ರಶಸ್ತಿ
ಜೆಸಿ ಅತ್ಯುತ್ತಮ ಯುವ ಪ್ರಶಸ್ತಿ
ಇನ್ ಲ್ಯಾಂಡ್ ಪ್ರಶಸ್ತಿ
ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ
ನೇಮಕಗಳು : ಮಂಗಳೂರು ವಿಶ್ವವಿದ್ಯಾನಿಲಯದ ಸೆನೆಟ್
ಸದಸ್ಯರಾಗಿ ನಾಮಕರಣ
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯರಾಗಿ
ನಾಮಕರಣ
ಪ್ರಶಸ್ತಿಗಳು: ಅತ್ಯುತ್ತಮ ತನಿಖಾ ವರದಿಗಾರ - ರಾಜ್ಯ
ಪತ್ರಕರ್ತರ ಸಂಘದ ಪ್ರಶಸ್ತಿ
ಬೆಂಗರೆ ಬಾನುಲಿ ಸಾಕ್ಷ್ಯರೂಪಕಕ್ಕೆ ಅಖಿಲ ಭಾರತ ಆಕಾಶವಾಣಿ ರಾಷ್ಟ್ರೀಯ ಪ್ರಶಸ್ತಿ
ಜೆಸಿ ಅತ್ಯುತ್ತಮ ಯುವ ಪ್ರಶಸ್ತಿ
ಇನ್ ಲ್ಯಾಂಡ್ ಪ್ರಶಸ್ತಿ
ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ
ನೇಮಕಗಳು : ಮಂಗಳೂರು ವಿಶ್ವವಿದ್ಯಾನಿಲಯದ ಸೆನೆಟ್
ಸದಸ್ಯರಾಗಿ ನಾಮಕರಣ
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯರಾಗಿ
ನಾಮಕರಣ